ದ್ವಂದ್ವ- Duality



ದಿನದ ಅಂತ್ಯ ದೂರವಿಲ್ಲ, ನಿದ್ದೆಯ ಸುಳಿವುಯಿಲ್ಲ. ಫ್ಯಾನಿನ ವೇಗವನ್ನು ೫ಕ್ಕೇಯಿಟ್ಟರೆ ಚಳಿ, ನಾಲ್ಕಕ್ಕೆಯಿಟ್ಟರೆ ಶೆಕೆ ಮತ್ತು
ಸೊಳ್ಳೆಗಳ ಕರ್ಕಷ ಹಾಡು. ಬೆಳಗ್ಗೆಯೆದ್ದು ಮುಸುಕು ತೆಗೆದು ಕನಸುಗಳಿಗೆ ಭಂಗಿತಂದು ಬೆಳಗಿನ ಕೆಲಸಗಳನ್ನು ಶುರುಮಾಡುವುದೋ
ಅಥವಾ ಮುಸುಕಿನಲ್ಲೇ ಕನಸು ಮುಂದುವರೆಯಲು ಬಿಡುವುದೋ? ಕಾಣದ ಭವಿಷ್ಯವನ್ನು ಗಟ್ಟಿ ಮಾಡುವುದೋ, ಕಾಣಿಸುವ ವರ್ತಮಾನದಲ್ಲಿ ಮಾನ ಉಳಿಸಿಕೊಳ್ಳುವುದೋ? ಭೂತದಲ್ಲಿ ಹುಟ್ಟಿದ ಭಯಗಳು ಭವಿಷ್ಯದಲ್ಲಿ ಪುನರಾವರ್ತಿಸುವುದೋಯೆಂಬ ಭಯದಲ್ಲಿ ಬೇಯುವುದೋ?ಹಿಂದಿದನ್ನು ಮರೆತು ಮುಂದೆಸಾಗುವುದೋ? ಮೆತ್ತನೇ ದಿಂಬೋ, ಗಟ್ಟಿ ದಿಂಬೋ? ಕಪ್ಪು ಬಿಳುಪೋ, ವರ್ಣ ರಂಜೆತವೋ? ದೋಸೆಗೆ ಚಟ್ನಿ ಪುಡಿ ಮತ್ತು ತುಪ್ಪವೋ ಅಥವಾ ಕಾಯಿ ಚಟ್ನಿಯೋ? 
ದಿನನಿತ್ಯದ ದ್ವಂದ್ವಗಳನ್ನು ಅರ್ಥೈಸಿಕ್ಕೊಂಡು ಜೀವಿಸುವುದೇ ಮನಸ್ಸಿಗೆ ಕಷ್ಟ ಪಾಪ ಅದಾದರೂ ಹೇಗೆ ದ್ವೈತಾದ್ವೈತದ
ಚಿಂತೆ ಮಾಡಿಯಾತು. 



Comments

Popular posts from this blog

HOME

Conflict and Co-existence

The chaos-Inside out