Momentary Alienation- 01





ಕಾರ್ಲ್ ಮಾರ್ಕ್ಸರ ಪರಕೀಯತೆಯ ಅನುಭವವಾಗಿಲ್ಲವಾದರೂ ಕೆಲವೊಮ್ಮೆ ನನ್ನ  ಮಂಚದಲ್ಲಿ ಸುಕ್ಕಾಗಿರುವ ಹೊದ್ದಿಗೆಯಿಂದ ಹೊಮ್ಮುವ ಚಿರಪರಿಚಿತ ವಾಸನೆಯಿಂದ, ಪಕ್ಕದ ಖಾಲಿ ಜಾಗದಿಂದ ಕೇಳಿ ಬರುವ ಬೆಳ್ಳಕ್ಕಿಯ ಕೂಗುಗಳಿಂದ, ನಿತ್ಯ ಜೀವನದ ಕಟ್ಟು ಪಾಡಿನಿಂದ, ಬೆಂಗಳೂರಿನ ವಿಶಾಲತೆ ಮತ್ತು ಅಪರಿಚಿತತೆಯಿಂದ ನನ್ನನ್ನು ನಾನು ದೂರಮಾಡಿಕೊಂಡಿದ್ದೇನೆ. ಗೆಳೆಯರೊಂದ್ದಿಗೆ ಕುಡಿದು ಕುಪ್ಪಳಿಸುವ ಸಮಯದಲ್ಲಿ, ಮಧ್ಯಾಹ್ನದ ಮಂಪರಿನಲ್ಲಿ ಬರುವ ಮೀಟಿಂಗ್ ಕರೆಗಳ ನಡುವಿನಲ್ಲಿ ನಾನು ಈ ಗುಂಪಿಗೆ ಸೇರುತ್ತೀನೋ ಇಲ್ಲವೋ ಎಂಬ ಸಂದೇಹ ಬರುತ್ತದೆ. ಮನೆಯವರೆಲ್ಲ ಕೂತು ಊಟ ಮಾಡುವಾಗ ನಾನು ಯಾಕೆ ಈ ಸಮಯದಲ್ಲಿ ಇಲ್ಲಿದ್ದೀನಿ ಎಂಬ ಪ್ರಶ್ನೆ ಸುಳಿದು ಮಾಯವಾಗುತ್ತದೆ. ಕ್ಯಾಮೆರಾದ ಹಿಂದೆ ನಿಂತು ದೂರದಲ್ಲಿ ನಗುತ್ತಿರುವ ಪ್ರಪಂಚವನ್ನು ಕ್ಲಿಕಿಸುವಾಗ ವಸ್ತುನಿಷ್ಠೆ, ವ್ಯಕ್ತಿನಿಷ್ಠೆಯ ಬಗ್ಗೆ ಯೋಚನಾ ಲಹರಿಗಳೇಳುತ್ತವೆ. ಮನಸ್ಸಿಗೆ ಹಿತವೆನ್ನಿಸುವ ಜನರು, ಸ್ಥಳಗಳು ಸಿಕ್ಕರು ನಮ್ಮ ಶಾಂತಿ ಶಾಶ್ವತವೇ? ಹಳೆಯ ನೀರಿನಲ್ಲಿ ಹೊಸ ಪ್ರವಾಹದ ಭಯ, ಹೊಸ ನೀರು ಬಂದು ಹೊಂದಿಕ್ಕೊಂಡಮೇಲೆ ಹಳೆ ನೀರನ್ನು ನೆನೆಸಿಕೊಂಡು ಕಣ್ಣೀರಿಡುವ ಗೊಂದಲ. ಕೆಲವೊಮ್ಮೆ ಕಾಲ-ವ್ಯೋಮದ ನಿರಂತತೆಯಲ್ಲಿ ಎಲ್ಲವೂ ಕ್ಷಣಿಕವೆಂದೆನಿಸಿದರೂ, ನಮ್ಮನ್ನು ನಾವು ಯಾವುದೋ ದೂರದ ಗ್ರಹದ ಗುರುತ್ವಾಕರ್ಷಣೆಯನ್ನು ತಪ್ಪಿಸಿಕೊಂಡು ಗೊತ್ತು-ಗುರಿಯಿಲ್ಲದೆ ತೇಲುತ್ತಿರುವ ಉಪಗ್ರಹದ ತರಹ ಇರಲಾರದೆ, ಯಾರಿಗೋ, ಯಾವುದೋ ಊರಿಗೋ ನಮ್ಮ ಲಂಗರು ಹಾಕಿ ಬದುಕುತ್ತೇವೆ.  ಸೂತ್ರವ ಹರಿದ ಗಾಳಿಪಟದ ಹಾಗೆಯಿದ್ದವರು ಸೂತ್ರದ ಬೊಂಬೆಯಾಗಿ ಯಾರದ್ದೋ ಕುಶಿಗೆ ಕುಣಿಸಿಕೊಳ್ಳುತ್ತೇನೆ. ಮಾರ್ಚ ೧೦ರಿಂದ ಮೇ ಕೊನೆಯವರೆಗು ಮನೆಯ ಒಳಗೆ, ಮನೆಯ ಹತ್ತಿರ ಕ್ಲಕಿಸಿದ ಚಿತ್ರಗಳಿವು.
I may have not experienced Alienation in the true marxist sense but I have distanced myself from the familiar smell of my crumpled bed sheet, the sounds of the cuckoo next door, from the mundane, and from the vast strangeness of Bangalore. When I am out with friends drinking, in the middle of that sleepy afternoon zoom calls I have questioned whether I belong anywhere. When I am having dinner with my Family, I wonder why I exist at this moment of time. When I am behind the camera clicking the world my mind thinks about the classic subject-object problem of the arts. Even If I meet the people I love and live in a place where I feel home, Is my tranquility permanent? Whilst in the known waters, the new flow scares me and when I get used to the new flow, the old known waters feel nostalgic. Even If everything feels temporary in the space-time continuum, I can’t suspend myself in the vast space like a satellite away from its parent planet’s gravitational powers, I need the anchorage in the form of people and places. Once a suspended kite, I am now a puppet who dances for the happiness of others. A photo series stretching from March 10th of 2020 to the end of May 2020.  










An ongoing series about spaces, isolation, and momentary alienation

Comments

Popular posts from this blog

HOME

The chaos-Inside out

Tarmac