Posts

Showing posts with the label photoseries

Conflict and Co-existence

Image
When I am still and trying to sleep on the bed of my insecurities, the thoughts tries to occupy me like creepers and climbers taking over a forlorn rusty window. I may seem like a Photograph of a sunny beach from the outside, deep down I am just the frozen frame of a dusty vase with a dried flower on a faded table cloth. The nature consumes the things that are stagnant and so do thoughts inside our heads.  ಸಂತೋಷ ಕ್ಷಣಿಕ ಸಂತೋಷ ಮನುಷ್ಯ ಮಾಡಿದ ವಸ್ತುಗಳ ತರಹ ತಾತ್ಕಾಲಿಕ. ಅಸೂಯೆ, ಬೇಜಾರು ಕಾಲ ಕ್ರಮೇಣ  ಅದನ್ನು ಆಕ್ರಮಿಸುತ್ತದೆ ನಿಸರ್ಗ ಮನುಷ್ಯ  ಸೃಷ್ಠಿಸಿದನ್ನು ಆಕ್ರಮಿಸುವಹಾಗೆ. ಚಿತ್ರ ಮಾಸುತ್ತದೆ, ಶಾಹಿ ಕರಗಿ ಭೂಮಿ ಸೇರುತ್ತದೆ. ಬ್ರಹ್ಮಾಂಡದ ತಿಳಿ ಕತ್ತಲಿನಲ್ಲಿ ಉಳಿಯುವುದು ನಾವು ಮಾಡಿದ ಕಾರ್ಯಗಳ  ಪರಿಣಾಮದ ಬಳ್ಳಿ ಮಾತ್ರವೇ?   

Momentary Alienation- 03

Image
ಚಿತ್ರದ ಹಿಂದಿರುವ ವ್ಯಕ್ತಿಯಾದ ನನಿಗೆ ಸೌಂದರ್ಯ ವೃದ್ಧಿಯ ಚಿಂತೆ, ನನ್ನ ಚಿತ್ರದ ವಸ್ತುವಾದ ಆ ಮನುಷ್ಯನು ಹಿಂದಿರುವ ಎರಡು ಕಟ್ಟಡಗಳ ನಡುವೆ ಬರಬೇಕು ಎನ್ನುವ ಹಂಬಲ. ಆದರೆ ತನ್ನ ವೃತ್ತಿಯ ಬಿಡುವಿನಲ್ಲಿ ಹಿಂದಿರುವ ಕಟ್ಟಡದ ವಿಸ್ತಾರವನ್ನು ನೋಡಿ ಕಣ್ಣು ಅರಳಿಸುವನೆ? ಅಲ್ಲಿ ವಾಸಮಾಡುವ ಜನರ ಜೀವನ ಶೈಲಿ ನೆನೆದು ತುಸು ಅಸೂಯೆ ಪಟ್ಟಿರಬಹುದೇ? ದೂರದಲ್ಲೆಲ್ಲೋ ನಿಂತು ಅವನ ಚಿತ್ರ ತೆಗೆಯುತ್ತಿರುವ ನನ್ನ ಅಸ್ತಿತ್ವದ ಅರಿವು ಅವನಿಗೆಯಿಲ್ಲವಾದರು ಅವನು ತನ್ನ ಸುತ್ತಲಿರುವುದನ್ನು ಹೇಗೆ ನೋಡುತ್ತಾನೆಯೆಂಬ ಪ್ರಶ್ನೆ ನನ್ನ ಕಾಡಿದೆ. ಕ್ಷಣಿಕವಾಗಿ ನಾವಿರುವ ವ್ಯೋಮದಿಂದ ಪ್ರತ್ಯೇಕವಾಗಿ ಯಾವುದೋ ತ್ರಿಶಂಕುವನ್ನು ಪ್ರವೇಶಿಸಿ ಕ್ಷಣಾರ್ಧದಲ್ಲಿ ಹಿಂದಿರುಗುವ ಹಾಗೆ ಹಲವಾರು ಬಾರಿಯಾಗಿದೆ . ಈ ಬಡಾವಣೆಗಳಲ್ಲಿ ಸುಡು ಬಿಸಿಲಿನ ಮಧ್ಯಾಹ್ನದಲ್ಲಿ ಕಿವಿಕಟ್ಟುವ ಮೌನ ಆವರಿಸುತ್ತದೆ. ಮಹಡಿಯ ಮೇಲೆ ಚಪ್ಪಲಿಯಿಲ್ಲದೆ ಹೋಗಿ ಸುಡುವ ಕಾಂಕ್ರೀಟಿನ ಮೇಲೆ ನಿಂತಾಗ ಪರಕೀಯತೆ ಬಾಸವಾಗುತ್ತದೆ. ಯಾವುದೋ ರೆಸಾರ್ಟಿನಲ್ಲಿ ಚುಮು ಚುಮು ಚಳಿಯಲ್ಲಿ ಹಚ್ಚಿರುವ ಬೆಂಕಿಯನ್ನು ಏಕಾಗ್ರತೆಯಲ್ಲಿ ನೋಡುವಾಗ ಎಲ್ಲೋ ತೇಲಿಹೋಗುವಹಾಗುತ್ತದೆ. ಸಿಲ್ಕ್ ಬೋರ್ಡಿನ ಜನಜಂಗುಳಿಯ ಮದ್ಯ ಗಾಡಿಯ ಮೇಲೆ ಕೂತಿರುವಾಗ ಚರ್ಮ ಹಿಂಡಿ ಇದು ನಿಜವೇಯೆಂದು ನೋಡಿಕೊಳ್ಳಬೇಕೆಂದೆನಿಸುತ್ತದೆ. ಯಾವುದೋ ಹೂವರಳಿ ನೆಲಕಚ್ಚಿದ ಮೇಲೆ ಎತ್ತಿಕೊಂಡು ಅದರ ಒಳಗೇನಿಂದೆಯೆಂದು ಕಣ್ಣಿಗೆ ಹತ್ತಿರ ತಂದು ಇಣು...

Momentary Alienation -02

Image
Exploring the same themes of alienation and the momentary isolation from the environment around us. Here is a two photo series. 1. Reflection of the TV screen and my Mom’s head on the door of my room. My Mom couldn’t bear the overtly fear-mongering Headlines on one of the Kannada news channels and she switched off just the Dish set and not the whole TV, she continued her embroidery completely forgetting about the blue screen that lit the entire living room. 2. To get some fresh air I went to the terrace and I could see this Daily wage worker in the backdrop of a huge apartment complex, I had forgotten to set the right white balance and the image came out very colder. After getting the images on the computer I wondered the coherence between the two images. And all that could be derived was: Two people completely unaware of the world around involving in their little hobbies and duties. 

FLAWS

Image
The fallen leaf was decaying while the white paint on the Tarmac bore cracks. The flat rocks that bridged the gap created by the sewage between the home and the road was flawed. When I stepped out to bring the vegetables I had not noticed any of these things. The closer I looked at the world it’s flaws enlarged. The closer the world looked at me, my flaws also enlarged. I have spoken about my poor skills in approaching people. That led me to shoot more inanimate objects. The more I started to shooting them, the peer pressure of finding the best light, hiding the flaws of a person, forcing a better composition reduced. The process became way more inward and almost meditative in nature.  CHECK THE FULL SERIES BELOW 

Momentary Alienation- 01

Image
ಕಾರ್ಲ್ ಮಾರ್ಕ್ಸರ ಪರಕೀಯತೆಯ ಅನುಭವವಾಗಿಲ್ಲವಾದರೂ ಕೆಲವೊಮ್ಮೆ ನನ್ನ  ಮಂಚದಲ್ಲಿ ಸುಕ್ಕಾಗಿರುವ ಹೊದ್ದಿಗೆಯಿಂದ ಹೊಮ್ಮುವ ಚಿರಪರಿಚಿತ ವಾಸನೆಯಿಂದ, ಪಕ್ಕದ ಖಾಲಿ ಜಾಗದಿಂದ ಕೇಳಿ ಬರುವ ಬೆಳ್ಳಕ್ಕಿಯ ಕೂಗುಗಳಿಂದ, ನಿತ್ಯ ಜೀವನದ ಕಟ್ಟು ಪಾಡಿನಿಂದ, ಬೆಂಗಳೂರಿನ ವಿಶಾಲತೆ ಮತ್ತು ಅಪರಿಚಿತತೆಯಿಂದ ನನ್ನನ್ನು  ನಾನು ದೂರಮಾಡಿಕೊಂಡಿದ್ದೇನೆ. ಗೆಳೆಯರೊಂದ್ದಿಗೆ ಕುಡಿದು ಕುಪ್ಪಳಿಸುವ ಸಮಯದಲ್ಲಿ, ಮಧ್ಯಾಹ್ನದ ಮಂಪರಿನಲ್ಲಿ ಬರುವ ಮೀಟಿಂಗ್ ಕರೆಗಳ ನಡುವಿನಲ್ಲಿ ನಾನು ಈ ಗುಂಪಿಗೆ ಸೇರುತ್ತೀನೋ ಇಲ್ಲವೋ ಎಂಬ ಸಂದೇಹ ಬರುತ್ತದೆ. ಮನೆಯವರೆಲ್ಲ ಕೂತು ಊಟ ಮಾಡುವಾಗ ನಾನು ಯಾಕೆ ಈ ಸಮಯದಲ್ಲಿ ಇಲ್ಲಿದ್ದೀನಿ ಎಂಬ ಪ್ರಶ್ನೆ ಸುಳಿದು ಮಾಯವಾಗುತ್ತದೆ. ಕ್ಯಾಮೆರಾದ ಹಿಂದೆ ನಿಂತು ದೂರದಲ್ಲಿ ನಗುತ್ತಿರುವ ಪ್ರಪಂಚವನ್ನು ಕ್ಲಿಕಿಸುವಾಗ ವಸ್ತುನಿಷ್ಠೆ, ವ್ಯಕ್ತಿನಿಷ್ಠೆಯ ಬಗ್ಗೆ ಯೋಚನಾ ಲಹರಿಗಳೇಳುತ್ತವೆ. ಮನಸ್ಸಿಗೆ ಹಿತವೆನ್ನಿಸುವ ಜನರು, ಸ್ಥಳಗಳು ಸಿಕ್ಕರು ನಮ್ಮ ಶಾಂತಿ ಶಾಶ್ವತವೇ? ಹಳೆಯ ನೀರಿನಲ್ಲಿ ಹೊಸ ಪ್ರವಾಹದ ಭಯ, ಹೊಸ ನೀರು ಬಂದು ಹೊಂದಿಕ್ಕೊಂಡಮೇಲೆ ಹಳೆ ನೀರನ್ನು ನೆನೆಸಿಕೊಂಡು ಕಣ್ಣೀರಿಡುವ ಗೊಂದಲ. ಕೆಲವೊಮ್ಮೆ ಕಾಲ-ವ್ಯೋಮದ ನಿರಂತತೆಯಲ್ಲಿ ಎಲ್ಲವೂ ಕ್ಷಣಿಕವೆಂದೆನಿಸಿದರೂ, ನಮ್ಮನ್ನು ನಾವು ಯಾವುದೋ ದೂರದ ಗ್ರಹದ ಗುರುತ್ವಾಕರ್ಷಣೆಯನ್ನು ತಪ್ಪಿಸಿಕೊಂಡು ಗೊತ್ತು-ಗುರಿಯಿಲ್ಲದೆ ತೇಲುತ್ತಿರುವ ಉಪಗ್ರಹದ ತರಹ ಇರಲಾರದೆ,...